ಹೆನ್ರಿ ಬ್ರಿಗ್ಸ್ (1561-1630) ಒಬ್ಬ ಇಂಗ್ಲಿಷ್ ಗಣಿತವಿದ. == ಜೀವನ == ಉತ್ತರ ಹ್ಯಾಲಿಫ್ಯಾಕ್ಸಿನ ವಾರ್ಲಿವುಡ್ ಎಂಬಲ್ಲಿ ಜನನ. ಆಕ್ಸ್‌ಫರ್ಡಿನಲ್ಲಿ ಮರಣ (29 ಜನವರಿ 1630). ವಿದ್ಯಾಭ್ಯಾಸ ಕೇಂಬ್ರಿಜಿನಲ್ಲಿ ನಡೆಯಿತು. ಈತ 1596 ರ ತನಕ ಅಲ್ಲಿಯೇ ಪಾಠಪ್ರವಚನ ನಡೆಸುತ್ತಿದ್ದ. ಅನಂತರ ಲಂಡನ್ ಮತ್ತು ಆಕ್ಸ್‌ಫರ್ಡ್‌ಗಳಲ್ಲಿ ಗಣಿತವಿಜ್ಞಾನದ ಪ್ರಾಧ್ಯಾಪಕನಾಗಿ ಕೆಲಸಮಾಡಿದ. ಲಘುಗಣಕಗಳ ಬಗ್ಗೆ ಈತ ವಿಶೇಷ ಪರಿಶ್ರಮ ವಹಿಸಿ, ಸ್ಕಾಟ್ಲೆಂಡಿನ ಗಣಿತವಿದ ಜಾನ್ ನೇಪಿಯರ್ (1550-1617) ಸೂಚಿಸಿದ್ದ ಆಧಾರದ ಕೋಷ್ಟಕಗಳ ( ) ಬದಲಿಗೆ 10 ಆಧಾರದ ಲಘುಗಣಕ ಕೋಷ್ಟಕಗಳನ್ನು ರಚಿಸಿದ. ಲೆಕ್ಕಾಚಾರಗಳಿಗೆ ಸಂಬಂಧಿಸಿದಂತೆ ದಶಮಾಂಶದ 14ನೆಯ ಸ್ಥಾನದವರೆಗೂ (14 ) ನಿಖರತೆ ನೀಡಬಲ್ಲ ಕೋಷ್ಟಕದ ರಚನೆಯಲ್ಲೂ ಶ್ರಮವಹಿಸಿದ. ಪ್ರಚಲಿತವಾಗಿರುವ ದೀರ್ಘ ಭಾಗಾಹಾರದ ಕ್ರಮವನ್ನು ರೂಪಿಸಿದವ ಈತ. ಇವನು ರಚಿಸಿದ ಅರಿತ್‌ಮೆಟಿಕ ಲಾಗರಿತಮಿಕ ಗ್ರಂಥ 1624ರಲ್ಲಿ ಪ್ರಕಟವಾಯಿತು; ಮತ್ತೊಂದು ಕೃತಿ ಟ್ರಿಗೊನೊಮೆಟ್ರಿಕ್ ಬ್ರಿಟಾನಿಕ ಇವನ ಮರಣಾನಂತರ ಪ್ರಕಟವಾಯಿತು. == ಬ್ರಿಗ್ಸ್ (ಅರ್ಧಕೋನ) ಸೂತ್ರಗಳು == , , ಗಳು ಯಾವುದೇ ತ್ರಿಭುಜವೊಂದರ ಬಾಹುಗಳಾಗಿದ್ದು () ಅದರ ಅರ್ಧಪರಿಧಿಯಾಗಿರಲಿ ( ). ಬಾಹುಗಳ ಅಭಿಮುಖ ಕೋನಗಳು ( ) ಅನುಕ್ರಮವಾಗಿ α , β {\ \ ,\ } ಮತ್ತು γ {\ \ } ಗಳಾಗಿರಲಿ. ಬಾಹು, ಅಭಿಮುಖ ಕೋನ ಮತ್ತು ಅರ್ಧಪರಿಧಿ ಇವುಗಳಿಗೆ ಇರುವ ತ್ರಿಕೋಣಮಿತೀಯ ಸಂಬಂಧ: ⁡ α 2 = ( − ) ( − ) {\ \ {\ {\ }{2}}={\ {\ {(-)(-)}{}}}} ಇದೇ ರೀತಿ ⁡ β 2 {\ \ {\ {\ }{2}}} ಮತ್ತು ⁡ γ 2 {\ \ {\ {\ }{2}}} ಗಳಿಗೆ ಕೂಡ. ಜೊತೆಗೆ ⁡ α 2 = ( − ) {\ \ {\ {\ }{2}}={\ {\ {(-)}{}}}} ⁡ β 2 {\ \ {\ {\ }{2}}} ಮತ್ತು ⁡ γ 2 {\ \ {\ {\ }{2}}} ಎಂಬ ಸಂಬಂಧಗಳೂ ಇವೆ. ಇವಕ್ಕೆ ಬ್ರಿಗ್ಸ್ ಸೂತ್ರಗಳೆಂದು ಹೆಸರಿದೆ. == ಉಲ್ಲೇಖಗಳು == == ಹೊರಗಿನ ಕೊಂಡಿಗಳು == ಹೆನ್ರಿ ಬ್ರಿಗ್ಸ್ Encyclopædia 400 , , , 14 2008 ( , ) ', .; , ., " ", ,